ಬೆಂಕಿಗಾಹುತಿಯಾದ ಕ್ಯಾಬ್ 
ದೇಶ

ಚಲಿಸುತ್ತಿದ್ದ ಉಬರ್ ಕ್ಯಾಬ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಮಹಿಳೆಯ ಸಮಯ ಪ್ರಜ್ಞೆಯಿಂದ ಉಳಿದ ಡ್ರೈವರ್ ಜೀವ

ಚಲಿಸುತ್ತಿದ್ದ ಉಬರ್ ಕ್ಯಾಬ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೂದಲೆಳೆ ಅಂತರದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ಕ್ಯಾಬ್ ಚಾಲಕ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಚಲಿಸುತ್ತಿದ್ದ ಉಬರ್ ಕ್ಯಾಬ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೂದಲೆಳೆ ಅಂತರದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ಕ್ಯಾಬ್ ಚಾಲಕ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಟಿಟಿಕೆ ರೋಡ್ ಮೇಲ್ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಉಬರ್ ಕ್ಯಾಬ್ ನೋಡ ನೋಡುತ್ತಿದ್ದಂತೆಯೇ ಸಂಪೂರ್ಣ ಉರಿದು ಭಸ್ಮವಾಗಿದೆ. ಆರಂಭದಲ್ಲಿ ಕಾರಿನಲ್ಲಿ ಸುಟ್ಟ ವಾಸನೆ ಬರುತ್ತಿರುವ ಕುರಿತು ಅರಿತಿದ್ದ ಮಹಿಳಾ ಪ್ರಯಾಣಕಿ ಪಲ್ಲವಿ ಸಿಂಗ್ ಅವರು ವಾಸನೆ ಹೊರಗಡೆ ಬರುತ್ತಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಕ್ಯಾಬ್ ಚಲಿಸುತ್ತಿದ್ದಂತೆಯೇ ವಾಸನ ಮತ್ತು ಹೊಗೆ ಹೆಚ್ಚಾಗಿದ್ದು, ಕಾರಿನಿಂದಲೇ ವಾಸನೆ ಬರುತ್ತಿದೆ ಎಂದು ತಿಳಿದು ಕೂಡಲೇ ಚಾಲಕನಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಚಾಲಕ ಕಾರು ನಿಲ್ಲಿಸಿದ್ದಾನೆಯಾದರೂ ಈ ವೇಳೆಗಾಗಲೇ ಬೆಂಕಿ ವ್ಯಾಪಕವಾಗಿ ಕಾರಿನ ತುಂಬ ಹಬ್ಬಿದೆ. ಈ ದೃಶ್ಯ ನೋಡಿದ ಇತರೆ ಕ್ಯಾಬ್ ಚಾಲಕರು ಕಾರಿನಲ್ಲಿದ್ದ ಮಹಿಳೆ ಮತ್ತು ಚಾಲಕನನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಮಹಿಳೆ ಮತ್ತು ಚಾಲಕ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ನೋಟಕ್ಕೆ ಕಾರಿನ ಎಸಿ ವ್ಯವಸ್ಥೆಯಲ್ಲಿನ ಒತ್ತಡದಿಂದಾಗಿ ಕಾರಿಗೆ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ.

ಇನ್ನು ಘಟನೆಯನ್ನು ಪಲ್ಲವಿ ಸಿಂಗ್ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ತಮಗಾದ ಭಯಾನಕ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಉಬರ್ ಸಂಸ್ಥೆ ವಿಷಯ ತಿಳಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಉಬರ್ ಸಂಸ್ಥೆ ವಿರುದ್ಧವೂ ಕಿಡಿಕಾರಿದ್ದಾರೆ. ಇದೀಗ ಕ್ಯಾಬ್ ಬೆಂಕಿಗಾಹುತಿಯಾದ ವಿಡಿಯೋ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!